ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತದಾನ

ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತದಾನ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಕಲಘಟಗಿ: ಲೋಕಸಭಾ ಚುನಾವಣೆಯ ಮೂರನೇ ಹಂತ ಹಾಗೂ ರಾಜ್ಯದಲ್ಲಿ ಎರಡನೇ ಹಂತದಲ್ಲಿ ಇಂದು ನಡೆಯುತ್ತಿರುವ ಚುನಾವಣಾ ಮತದಾನದಲ್ಲಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಕಲಘಟಗಿಯ ಮಡಕಿಹೊನ್ನಳ್ಳಿಯ ಮತಗಟ್ಟೆಯಲ್ಲಿ ಇಂದು ಮತ ಚಲಾಯಿಸಿದರು.

  ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನ ಒದಗಿಸಿದ ಪವಿತ್ರ ಕರ್ತವ್ಯವನ್ನು ನನ್ನ ಮತಚಲಾಯಿಸುವುದರ ಮೂಲಕ ನಿರ್ವಹಿಸಿದ್ದೇನೆ. ನೀವೂ ಕೂಡ ಮತದಾನ ಮಾಡುವುದರ ಮೂಲಕ ನಿಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸಿ ಎಂದು ಮನವಿ ಮಾಡಿದರು.