ಆದಾಯ ಸುಧಾರಣೆ ನಿರೀಕ್ಷೆ: ಲ್ಯಾಂಕ್ಸೆಸ್

ಆದಾಯ ಸುಧಾರಣೆ ನಿರೀಕ್ಷೆ: ಲ್ಯಾಂಕ್ಸೆಸ್
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು : ಜರ್ಮನ್ ರಾಸಾಯನಿಕ ಉದ್ದಿಮೆಗೆ ಅನೇಕ ಸಂಕಷ್ಟಗಳ ವರ್ಷವಾಗಿತ್ತು: ಅನೇಕ ಗ್ರಾಹಕ ಕೈಗಾರಿಕೆಗಳಲ್ಲಿ ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ದುರ್ಬಲ ಬೇಡಿಕೆಯ ಜೊತೆಗೆ ಗ್ರಾಹಕರಿಂದ ಇನ್ವೆಂಟರಿ ಕಡಿತ, ಜರ್ಮನಿಯಲ್ಲಿ ಅಧಿಕ ವಿದ್ಯುತ್ ದರಗಳು ಹಾಗೂ ಭೌಗೋಳಿಕರಾಜಕೀಯ ಒತ್ತಡಗಳು. ಇವೆಲ್ಲವೂ, ಸ್ಪೆಶಲ್ಟಿ ರಾಸಾಯನಿಕಗಳ ಸಂಸ್ಥೆ LANXESSಗೆ ಹಣಕಾಸು ವರ್ಷ ೨೦೨೩ಅನ್ನು ಕಠಿಣಗೊಳಿಸಿತ್ತು. ಆದರೆ ಪ್ರಸ್ತುತದ ವರ್ಷಕ್ಕೆ, ಗಳಿಕೆಯಲ್ಲಿ(ಆದಾಯದಲ್ಲಿ) ಸಾಧಾರಣ ಏರಿಕೆಯನ್ನು ಗ್ರೂಪ್ ನಿರೀಕ್ಷಿಸುತ್ತಿದೆ.

ಹಣಕಾಸು ವರ್ಷ ೨೦೨೩ರಲ್ಲಿ ಗ್ರೂಪ್ ಮಾರಾಟಗಳು ೬.೭೧೪ ಬಿಲಿಯನ್ ಯೂರೋ ಆಗಿದ್ದು, ಇದು ಹಿಂದಿನ ಹಣಕಾಸು ವರ್ಷ ಇದ್ದ ೮.೦೮೮ ಬಿಲಿಯನ್ ಯೂರೋಗಿಂತ ಶೇಕಡ ೧೭.೦ ಕಡಿಮೆಯಾಗಿತ್ತು. EBITDA ಪ್ರೀ ಎಕ್ಸೆಪ್ಷನಲ್ಸ್, ಹಿಂದಿನ ವರ್ಷ ಇದ್ದ ೯೩೦ ಮಿಲಿಯನ್ ಯೂರೋಗೆ ಹೋಲಿಸಿದರೆ, ೫೧೨ ಮಿಲಿಯನ್ ಯೂರೋ ಆಗಿ ಶೇಕಡ ೪೪.೯ ತಗ್ಗಿತ್ತು. EBITDA ಮಾರ್ಜಿನ್ ಪ್ರೀ ಎಕ್ಸೆಪ್ಷನಲ್ಸ್, ಹಿಂದಿನ ವರ್ಷ ಇದ್ದ ಶೇಕಡ ೧೧.೫ಗಿಂತ ಕಡಿಮೆ ಆಗಿ ಶೇಕಡ ೭.೬ ಆಗಿತ್ತು.

LANXESS ಸಿಇಒ ಮಾಥಿಯಾಸ್ ಝ್ಯಾಕರ್ಟ್ ಅವರು ಮಾತನಾಡಿ ಜರ್ಮನ್ ರಾಸಾಯನ ಹಾಗೂ LANXESSನಲ್ಲಿ ನಾವು, ಹಿಂದೆAದೂ ಈ ರೀತಿಯ ಬಿಕ್ಕಟ್ಟಿನ ವರ್ಷವನ್ನು ಕಂಡಿರಲಿಲ್ಲ. ಆದರೆ ಸಾಧ್ಯವಾದಷ್ಟೂ ಸ್ಥಿರವಾಗಿ ಈ ಹಂತವನ್ನು ಸಾಗಿಹೋಗಲು, ಮತ್ತು ಕಾಲ ಸುಧಾರಣೆಯಾದಾಗ, ಮತ್ತೊಮ್ಮೆ ಸಾಧ್ಯವಾದಷ್ಟು ಅತ್ಯುತ್ತಮ ಸ್ಥಾನದಲ್ಲಿರಲು ನಾವು ಸಕಲ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ನಮ್ಮ `FORWARD!’ ಕ್ರಿಯಾಯೋಜನೆಯೊಂದಿಗೆ, ನಾವು ಆರಂಭಿಕ ಹಂತದಲ್ಲೇ ಸರಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳುತ್ತಾರೆ.

ಒಟ್ಟಾರೆಯಾಗಿ ಹಣಕಾಸು ವರ್ಷ ೨೦೨೪ಕ್ಕೆ, EBITDA ಪ್ರೀ ಎಕ್ಸೆಪ್ಷನಲ್ಸ್, ೨೦೨೩ರ ಅಂಕಿಗಿAತ ಸಾಧಾರಣವಾಗಿ ಹೆಚ್ಚಾಗಿರುತ್ತದೆ ಎಂದು LANXESS ನಿರೀಕ್ಷಿಸುತ್ತಿದೆ. ಆದರೂ, ಗಳಿಕೆಗಳು ಹಿಂದಿನ ವರ್ಷಗಳ ಸರಾಸರಿ ಮಟ್ಟಕ್ಕಿಂತ ಗಣನೀಯವಾಗಿ ಕಡಿಮೆಯೇ ಆಗಿರುತ್ತದೆ. ಆದ್ದರಿಂದ ೨೦೨೪ರಲ್ಲಿ ನಾವು ನಮ್ಮ ಸ್ಥಾನ ಹಾಗೂ ಪ್ರಕ್ರಿಯೆಗಳತ್ತ ಕಾರ್ಯ ಮುಂದುವರಿಸಿ ನಮ್ಮ ಹಣಕಾಸು ಬೇಸ್ಅನ್ನು ಬಲಪಡಿಸಿಕೊಳ್ಳುತ್ತೇವೆ ಎಂದು ಝ್ಯಾಕರ್ಟ್ ಹೇಳುತ್ತಾರೆ.