ಇಪಿಎಸ್ 95 ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿ ನಿವೃತ್ತ ನೌಕರರ ಸಂಘದ 76ನೇ ಮಾಸಿಕ ಸಭೆ.

ಇಪಿಎಸ್ 95 ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿ ನಿವೃತ್ತ ನೌಕರರ ಸಂಘದ 76ನೇ ಮಾಸಿಕ ಸಭೆ.
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಇಪಿಎಸ್ ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿ ನಿವೃತ್ತ ನೌಕರರ ಸಂಘದ 76ನೇ ಮಾಸಿಕ ಸಭೆ ಮೇ 5 ರಂದು ಲಾಲ್ ಬಾಗ್ ಆವರಣದಲ್ಲಿ ಜರುಗಿತು. ಈ ಮಾಸಿಕ ಸಭೆಗೆ ಅಧಿಕ ನಿವೃತ್ತರು ಆಗಮಿಸಿದ್ದು, ಮೊದಲಿಗೆ ಸಂಘದ ಖಜಾಂಚಿ ಆರ್ ನಾಗರಾಜ ರವರು ಸದಸ್ಯರು ಹಾಗೂ ಪದಾಧಿಕಾರಿಗಳನ್ನು ಸ್ವಾಗತಿಸಿ ಪ್ರಸ್ತಾವಿಕ ಭಾಷಣ ಮಾಡಿದರು. ಸಂಘದ ಕಾರ್ಯಾಧ್ಯಕ್ಷರಾದ ನಂಜುಂಡೇಗೌಡ ಮಾತನಾಡಿ, ಸೆಪ್ಟೆಂಬರ್ 1, 2014 ಪೂರ್ವ ಹಾಗೂ ನಂತರ ನಿವೃತ್ತರಾದ ನೌಕರರ ಪಿಂಚಣಿಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರ ಭೇದ ಭಾವ ಮಾಡಿದ್ದು, ಇದಕ್ಕಾಗಿ ಧೃತಿಗೆಡುವುದು ಬೇಡ, ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡಿ, ಅಂತಿಮ ಗುರಿ ಕಾಣಬೇಕು ಹೊಂದಿರುತ್ತಾರೆ. 

     ಸಂಘದ ಉಪಾಧ್ಯಕ್ಷರಾದ ಸುಬ್ಬಣ್ಣ ಮಾತನಾಡಿ, ಅಧಿಕ ಪಿಂಚಣಿಗೆ ಸಂಬಂಧಿಸಿದಂತೆ, ಇಪಿಎಫ್ಓ ಅಧಿಕಾರಿಗಳು ಉದ್ಯೋಗದಾತರ ಜೊತೆ ಸರಿಯಾಗಿ ಸಂಪರ್ಕ ಸಾಧಿಸದೆ ಇದ್ದು, ನಿವೃತ್ತರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುತ್ತಾರೆ.

      ಇದೆ ಮೇ 11 ರಂದು ಬೆಳಿಗ್ಗೆ 11:00 ಗಂಟೆಗೆ ಚಿಕ್ಕಬಳ್ಳಾಪುರ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಪಿಎಸ್ ಪಿಂಚಣಿದಾರರ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸಮಾವೇಶವನ್ನು ಚಿಕ್ಕಬಳ್ಳಾಪುರ ಕೋರ್ಟ್ ಪಕ್ಕದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಿದ್ದು, ಆಸಕ್ತ ಎಲ್ಲಾ ಇಪಿಎಸ್ ನಿರುತ್ತರು ಈ ಸಮಾವೇಶದಲ್ಲಿ ಭಾಗವಹಿಸಲು ಕಾರ್ಯಧ್ಯಕ್ಷರಾದ ನಂಜುಂಡೇಗೌಡ ರವರು ಮನವಿ ಮಾಡಿದರು.  

    ಸಂಘದ ಜಂಟಿ ಕಾರ್ಯದರ್ಶಿ ಶ್ರೀ ರುಕ್ಮೇಶ್ ರವರು ಇಂದಿನ ಮಾಸಿಕ ಸಭೆಯ ಎಲ್ಲಾ ದೃಶ್ಯಾವಳಿಗಳನ್ನು ಚಿತ್ರೀಕರಣ ಮಾಡಿ, ಜೊತೆಗೆ ಸಭೆಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.