ಕೋವಿಶೀಲ್ಡ್ ಲಸಿಕೆ ಬಗ್ಗೆ ಕಾಂಗ್ರೆಸ್‌ ಅಪಪ್ರಚಾರ: ಸಿ.ಎನ್‌.ಮಂಜುನಾಥ್

ಕೋವಿಶೀಲ್ಡ್ ಲಸಿಕೆ ಬಗ್ಗೆ ಕಾಂಗ್ರೆಸ್‌ ಅಪಪ್ರಚಾರ: ಸಿ.ಎನ್‌.ಮಂಜುನಾಥ್
ಕೋವಿಶೀಲ್ಡ್ ಲಸಿಕೆ ಬಗ್ಗೆ ಕಾಂಗ್ರೆಸ್‌ ಅಪಪ್ರಚಾರ: ಸಿ.ಎನ್‌.ಮಂಜುನಾಥ್
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಕೋವಿಶೀಲ್ಡ್ ಲಸಿಕೆ ವಿರುದ್ಧ ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಖ್ಯಾತ ಹೃದ್ರೋಗ ತಜ್ಞರು ಡಾ.ಸಿ.ಎನ್.ಮಂಜುನಾಥ್‌ ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿದ ಅವರು, ಕೋವಿಶೀಲ್ಡ್ ಲಸಿಕೆಯಿಂದ ಆಗಬಹುದಾದ ಅಡ್ಡಪರಿಣಾಮ ಅತಿ ವಿರಳ. ಕೊರೊನಾದಿಂದ ಕಾಪಾಡಿದ್ದೇ ವ್ಯಾಕ್ಸಿನ್. ಬಹುತೇಕ ಅಡ್ಡಪರಿಣಾಮಗಳು ಲಸಿಕೆ ಪಡೆದ ಕೆಲವೇ ತಿಂಗಳಲ್ಲಿ ಕಂಡುಬರುತ್ತವೆ. ಈಗಾಗಲೇ ಲಸಿಕೆ ಪಡೆದು ಮೂರು ವರ್ಷ ಕಳೆದ ಕಾರಣ ಜನತೆ ಆತಂಕ ಪಡಬೇಕಾಗಿಲ್ಲ ಎಂದರು.