ನ್ಯಾಯಾಲಯ ರೇವಣ್ಣರಿಗೆ ಜಾಮೀನು ಮಂಜೂರು ಮಾಡಿರುವುದು ಸತ್ಯ, ನಿಷ್ಠೆಗೆ ಸಿಕ್ಕ ಜಯ : ಟಿ.ಎ.ಶರವಣ

ನ್ಯಾಯಾಲಯ ರೇವಣ್ಣರಿಗೆ ಜಾಮೀನು ಮಂಜೂರು ಮಾಡಿರುವುದು ಸತ್ಯ, ನಿಷ್ಠೆಗೆ ಸಿಕ್ಕ ಜಯ : ಟಿ.ಎ.ಶರವಣ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಮಾಜಿ ಸಚಿವ ಎಚ್‌.ಡಿ.ರೇವಣ್ಣರಿಗೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನು ಮಂಜೂರು ಮಾಡಿರುವುದು ಸತ್ಯ, ನಿಷ್ಠೆಗೆ ಜಯ ಸಿಕ್ಕಂತಾಗಿದೆ. ಕಾಂಗ್ರೆಸ್ ರೂಪಿಸಿದ್ದ ಸಂಚು ಇದರಿಂದ ವಿಫಲಗೊಂಡಿದೆ ಎಂದು ಟಿ.ಎ.ಶರವಣ ಹೇಳಿದರು.

 Advertisement

ಜಾಹೀರಾತಿಗಾಗಿ ಸಂಪರ್ಕಿಸಿ 6362546216

ವಿಧಾನಪರಿಷತ್ ಸದಸ್ಯ ಎಚ್.ಡಿ. ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ವಿನಾಕಾರಣ ರೇವಣ್ಣ ಅವರ ತೇಜೋವಧೆಗೆ ಸಂಚು ರೂಪಿಸಿದ್ದು, ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾಲ್ಕು ದಶಕಗಳ ರೇವಣ್ಣ ರವರ ರಾಜಕಾರಣದಲ್ಲಿ ರಾಜ್ಯಕ್ಕೆ ಅದರಲ್ಲೂ ಹಾಸನ ಜಿಲ್ಲೆಗೆ ರೇವಣ್ಣ ಕೊಡುಗೆ ಅಪಾರ. ಹಾಲು ಉತ್ಪಾದಕ ಕ್ಷೇತ್ರದಲ್ಲಿ ಅವರು ಜಾರಿಗೆ ತಂದಿರುವ ಸುಧಾರಣೆ ಇಡೀ ಭಾರತದಲ್ಲೇ ಮಾದರಿ. ಇಂಥ ನಾಯಕರ ತೇಜೋವಧೆ ಮಾಡುವ ಮಟ್ಟಿಗೆ ಕಾಂಗ್ರೆಸ್ ನಾಯಕರು ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.