ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಮುಖಂಡ ದೇವರಾಜೇಗೌಡ ವಿರುದ್ಧ ಪ್ರತಿಭಟನೆ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಮುಖಂಡ  ದೇವರಾಜೇಗೌಡ ವಿರುದ್ಧ ಪ್ರತಿಭಟನೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಹಾಸನ ಲೈಂಗಿಕ ಹಗರಣದ ಬ್ಲಾಕ್ ಮೈಲ್ ರಾಜಕಾರಣಿ ಬಿಜೆಪಿ ಮುಖಂಡ ದೇವರಾಜೇಗೌಡ ಮಹಿಳೆಯನ್ನು ಕಾಮಾಂಧನಾ ರೀತಿಯಲ್ಲಿ ಪ್ರಚೋದಿಸಿ ಒತ್ತಾಯಪೂರ್ವಕವಾಗಿ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಕೂಡಲೇ ಅವನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ಹಾಗೂ ಪ್ರತಿಕೃತಿ ದಹಿಸಲಾಯಿತು ಎಂದು  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ರವರು ತಿಳಿಸಿದರು.

 ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಮುಖಂಡ ದೇವರಾಜೇಗೌಡ ವಿರುದ್ಧ ನಡೆಸಿದ ಪ್ರತಿಭಟನೆಯ ವೇಳೆ ಎಸ್ ಮನೋಹರ್ ಮಾತನಾಡಿ ದೇವರಾಜೇಗೌಡ ಪೆನ್ ಡ್ರೈವ್ ಬ್ಲಾಕ್ ಮೇಲರ್ ಎಂದು ಈಗಾಗಲೇ ಕುಖ್ಯಾತಿಯನ್ನ ಗಳಿಸಿದ್ದಾನೆ ಇವನ ವಿರುದ್ಧ ಈಗ ಮಹಿಳೆ ದೂರು ನೀಡಿರುವುದು ಬಹಿರಂಗವಾಗಿದೆ ಆ ಹಿನ್ನೆಲೆಯಲ್ಲಿ ಅನವಶ್ಯಕವಾಗಿ ಪೆನ್ ಡ್ರೈವ್ ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡುತ್ತಿದ್ದ ಆರೋಪಿ ಇಂದು ಅವನ ಹೀನಾಯ ತನ ಬಹಿರಂಗವಾಗಿದೆ

 Advertisement

ಜಾಹೀರಾತಿಗಾಗಿ ಸಂಪರ್ಕಿಸಿ 6362546216

 ಮಹಿಳೆಯನ್ನ ಒತ್ತಾಯಪೂರ್ವಕವಾಗಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಅವನ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಂಡು ಅವನನ್ನ ಬಂಧಿಸಿ ರಾಜ್ಯದ ಜನತೆಗೆ ಅವನ ನೈಜ ಚಿತ್ರಣವನ್ನು ಹಾಗೂ ಹಿನ್ನಲೆಯನ್ನ ಬಹಿರಂಗಪಡಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು ಎಂದರು.

 ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್, ಮನೋಹರ್, ಕಾಂಗ್ರೆಸ್ ಮುಖಂಡರಾದ,ಎ ಆನಂದ್ ಜಿ ಪ್ರಕಾಶ್, ಪುಟ್ಟರಾಜು,ಚೇತನ್, ಹೇಮರಾಜು, ಚಿನ್ನಿ ಪ್ರಕಾಶ್, ಚಂದ್ರುಶೇಖರ್, ಉಮೇಶ್, ರಂಜಿತ್, ಎ. ಆನಂದ್ ಕುಮಾರ್, ರವಿಕುಮಾರ್,ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.